Friday, November 4, 2022

Consider everyone to be yours - Guru Basavanna

Whatever maybe

their religion,

whatever maybe

their status,

whatever maybe

their colour,

without discrimination, 

consider everyone

to be yours.


- Guru Basavana


Monday, September 19, 2022

ಲಿಂಗಾಯತರಾದವರು ಕಡ್ಡಾಯವಾಗಿ ಲಿಂಗ ಧರಿಸಬೆಕು

 ಅಂಗದ ಮೇಲೆ ಲಿಂಗವಿಲ್ಲದವರು ಲಿಂಗಕ್ಕೆ ಬೋನವ ಮಾಡಲಾಗದು.

ಮಾಡಿದರೆ [ಮಾಡಲಿ]

ಅವರು ಮಾಡಿದ ಬೋನವ ಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡರೆ,

ಕುಂಭೀಪಾಕ ನಾಯಕನರಕ ಕೂಡಲಚೆನ್ನಸಂಗಮದೇವಾ.

- ಗುರು ಚನ್ನಬಸವಣ್ಣನವರು



Friday, September 9, 2022

ಹೆದರದಿರು ಮನವೆ

ಹೆದರದಿರು ಮನವೆ, ಬೆದರದಿರು ತನುವೆ,

ನಿಜವನರಿತು ನಿಶ್ಚಿಂತನಾಗಿರು.

ಫಲವಾದ ಮರನ ಕಲ್ಲಲಿ ಇಡುವುದೊಂದು ಕೋಟಿ,

ಎಲವದಮರನ ಇಡುವರೊಬ್ಬರ ಕಾಣೆ.

ಭಕ್ತಿಯುಳ್ಳವರ ಬೈವರೊಂದುಕೋಟಿ,

ಭಕ್ತಿಯಿಲ್ಲದವರ ಬೈವರೊಬ್ಬರ ಕಾಣೆ.

ನಿಮ್ಮ ಶರಣರ ನುಡಿಯೆ ಎನಗೆ ಗತಿ, ಸೋಪಾನ, 

ಚೆನ್ನಮಲ್ಲಿಕಾರ್ಜುನಾ.

- ಅಕ್ಕಮಹಾದೇವಿ



Thursday, September 8, 2022

ಭಕ್ತ ಮತ್ತು ಜಂಗಮ

 🙏ಅಲ್ಲಮಪ್ರಭುದೇವರು🙏

ನಿಂದಡೆ; ಹೊನ್ನು ಹೆಣ್ಣು ಮಣ್ಣು ಹಿಡಿದು

ನೆಟ್ಟನೆ ಭಕ್ತನಾಗಿ ನಿಲ್ಲಬೇಕು.

ಸುಳಿದಡೆ; ಹೊನ್ನು ಹೆಣ್ಣು ಮಣ್ಣು ಬಿಟ್ಟು

ನೆಟ್ಟನೆ ಜಂಗಮವಾಗಿ ಸುಳಿಯಬೇಕು.

ನಿಂದು ಭಕ್ತನಲ್ಲದ, ಸುಳಿದು ಜಂಗಮವಲ್ಲದ

ಉಭಯಭ್ರಷ್ಟರನೇನೆಂಬೆ ಗುಹೇಶ್ವರಯ್ಯಾ ?

🙏🙏



ಲಂಡ ಭಕ್ತನಾದಾನು ಪುಂಡ ಜಂಗಮವಾದೀತು

ಆಚಾರವಡಗಿತ್ತು ಅನಾಚಾರವೆದ್ದಿತ್ತು.

ಅಲ್ಲದ ನಡೆಯ ನಡದಾರು ಸಲ್ಲದಚ್ಚುಗಳ ಮರಳಿವೊತ್ತಿಯಾರು.

ಭಕ್ತನೆ ಹೊಲೆಯನಾದಾನು ಜಂಗಮವೆ ಅನಾಚಾರಿಯಾದಾನು.

ಲಂಡ ಭಕ್ತನಾದಾನು ಪುಂಡ ಜಂಗಮವಾದೀತು.

ಲಂಡ ಪುಂಡ ಕೂಡಿ ಜಗಭಂಡರಾಗಿ ಕೆಟ್ಟಾರು.

ಮನದ ಹಿರಿಯರ ಬಿಟ್ಟಾರು ಕುಲದ ಹಿರಿಯರ ಪೂಜಿಸಿಯಾರು.

ಹದಿನೆಂಟು ಜಾತಿಯೆಲ್ಲ ಕೂಡಿ ಒಂದೆ ತಳಿಗೆಯಲ್ಲಿ ಉಂಡಾರು.

ಮತ್ತೆ ಕುಲಕ್ಕೆ ಹೋರಿಯಾಡಿಯಾರು, ಗುರುವ ನರನೆಂದಾರು.

ಲಿಂಗವ ಶಿಲೆಯೆಂದಾರು, ಜಂಗಮವ ಜಾತಿವಿಡಿದು ನುಡಿದಾರು.

ಭಕ್ತ ಜಂಗಮ ಪ್ರಸಾದವನೆಂಜಲೆಂದತಿಗಳೆದಾರು,

ತೊತ್ತು ಸೂಳೆಯರೆಂಜಲ ತಿಂದಾರು.

ಮತ್ತೆ ನಾ ಘನ ತಾ ಘನವೆಂದಾರು, ಒತ್ತಿದಚ್ಚುಗಳು ಹುತ್ತೇರಿ ಹುಳಿತಾವು,

ಅಷ್ಟರೊಳಗೆ ಶರಣರು ಪುಟ್ಟಿ ಸಂಹಾರವ ಮಾಡಿಯಾರು,

ಹೊಟ್ಟು ಹಾರೀತು, ಘಟ್ಟಿಯುಳಿದೀತು.

ಮಿಕ್ಕಿದ್ದು ಪಲ್ಲವಿಸೀತು ಮತ್ರ್ಯವೇ ಕೈಲಾಸವಾದೀತು.

ಭಕ್ತಿಯ ಬೆಳೆ ಬೆಳೆದೀತು ಘನಪ್ರಸಾದವುದ್ಧರಿಸೀತು.

ಕೂಡಲಚೆನ್ನಸಂಗಯ್ಯನ ಶ್ರೀಪಾದವೆ ಸಾಕ್ಷಿಯಾಗಿ ಬಸವಣ್ಣನೊಬ್ಬನೆ

ಕರ್ತನಾದನು.


- ಚಿನ್ಮಯ ಜ್ಞಾನಿ ಗುರು ಚನ್ನಬಸವಣ್ಣನವರು






Consider everyone to be yours - Guru Basavanna

Whatever maybe their religion, whatever maybe their status, whatever maybe their colour, without discrimination,  consider everyone to be yo...